ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನದಲ್ಲಿ ಬದಲಾವಣೆ ಆತಂಕಕಾರಿ : ಎಲ್.ಜಿ.ಹೆಗಡೆ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 22 , 2014
ಜನವರಿ 22, 2014

ಯಕ್ಷಗಾನದಲ್ಲಿ ಬದಲಾವಣೆ ಆತಂಕಕಾರಿ : ಎಲ್.ಜಿ.ಹೆಗಡೆ

ಸಿದ್ದಾಪುರ : ಯಕ್ಷಗಾನ ದಿನದಿಂದ ದಿನಕ್ಕೆ ತನ್ನ ಕ್ಷೇತ್ರವನ್ನು ವಿಸ್ತಾರಗೊಳಿಸಿಕೊಳ್ಳುತ್ತಿರುವುದು ಸ್ವಾಗತಾರ್ಹವಾದರೂ ಬದಲಾವಣೆಗೊಳ್ಳುತ್ತಿರುವುದು ಆತಂಕಮೂಡಿಸುವಂತಹುದಾಗಿದೆ. ಯಕ್ಷಗಾನ ತನ್ನ ಮೂಲ ಸ್ವರೂಪವನ್ನು ಉಳಿಸಿಕೊಂಡು ಮುಂದಿನ ಪೀಳಿಗೆಗೆ ಹಸ್ತಾಂತರಗೊಳ್ಳುವ ಅವಶ್ಯಕತೆ ಇದೆ ಎಂದು ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿ ಅಧ್ಯಕ್ಷ ಎಲ್.ಜಿ.ಹೆಗಡೆ ಹೇಳಿದರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ ಇದರ ಸಹಯೋಗದೊಂದಿಗೆ ದಿವಾನ್ ಯಕ್ಷಸಮೂಹ ಹಾರ್ಸಿಕಟ್ಟಾ ಇವರು ಗಜಾನನೋತ್ಸವ ಸಮಿತಿಯಲ್ಲಿ ನಡೆಸಿದ ಯಕ್ಷಸಂಜೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ತಾಲೂಕಾ ಕಸಾಪ ಅಧ್ಯಕ್ಷ ಕನೇಶ ಕೋಲಸಿರ್ಸಿ ಇಂದಿನ ಜಾಗತೀಕರಣ ಹಾಗೂ ಆರ್ಥಿಕ ನೀತಿಯಿಂದ ನಮ್ಮ ಸಂಸ್ಕೃತಿ-ಕಲೆಗಳ ಕುರಿತು ಚಿಂತನೆ ಕಡಿಮೆಯಾಗಿದೆ.

ಪರಿಸರಕ್ಕೆ ಪೂರಕವಾದ ಯಕ್ಷಗಾನ ಕಲೆ ಎಲ್ಲರನ್ನು ಆಕರ್ಷಿಸುವಂತಿದ್ದರೂ ಸರಕಾರದಿಂದ ಸಿಗುವ ಮಾನ್ಯತೆ ಕಡಿಮೆಯಾಗಿದೆ ಈ ಕುರಿತು ಜನಪ್ರತಿನಿಧಿಗಳು, ಅಧಿಕಾರಿಗಳು ಹೆಚ್ಚಿನ ಗಮನ ನೀಡಬೇಕೆಂದರು. ಜಿಪಂ ಸದಸ್ಯೆ ಶಾಲಿನಿ ಕೆ ಗೌಡರ್ ಹೂಕಾರ ಯಕ್ಷಸಂಜೆ ಕಾರ್ಯಕ್ರಮ ಉದ್ಘಾಟಿಸಿದರು. ಗ್ರಾಪಂ ಸದಸ್ಯೆ ಸೀಮಾ ಎಂ ಹೆಗಡೆ ಕಲ್ಮನೆ ಉಪಸ್ಥಿತರಿದ್ದರು. ಯಕ್ಷಗಾನ; ನಂತರ ಯಕ್ಷಮಂಡಲ ಧಾರವಾಡ ಇವರಿಂದ ಹೊಸ್ತೋಟ ಮಂಜುನಾಥ ಭಾಗವತ ಅವರು ಚಾಮರಸನ ಪ್ರಭುಲಿಂಗಲೀಲೆಯನ್ನಾಧರಿ ರಚಿಸಿದ ಪರಮೇಶ್ವರ ಹೆಗಡೆ ಐನಬೆಲ್ ಅವರ ನಿರ್ದೇನದಲ್ಲಿ ಮಾಯಾಕೋಲಾಹಲ ಯಕ್ಷಗಾನ ಪ್ರದರ್ಶನಗೊಂಡು ಕಲಾಸಕ್ತರನ್ನು ರಂಜಿಸಿತು. ಹಿಮ್ಮೇಳದಲ್ಲಿ ಪರಮೇಶ್ವರ ಹೆಗಡೆ ಐನಬೆಲ್, ಮಂಜುನಾಥ ಗುಡ್ಡೆದಿಂಬ ಮದ್ದಳೆ, ಮಹಾಬಲೇಶ್ವರ ನಾಯಕನಕೆರೆ ಚಂಡೆಯಲ್ಲಿ ಸಹಕರಿಸಿದರು.

ಡಾ.ಪ್ರಕಾಶ ಭಟ್ಟ, ದಿವಾಕರ ಹೆಗಡೆ ಕೆರೆಹೊಂಡ, ಮಣಾಲಿನಿ ಕಲಕೇರಿ, ಸವಿತಾ ಹೆಗಡೆ, ಮಾನಸಿ ಭಾತಖಂಡೆ, ನಿರೀಷಾರಾವ್, ಸಂಪದಾ ಸಬನೀಸ್ ಇವರುಗಳು ಉತ್ತಮವಾಗಿ ಮಾತ್ರನಿರ್ವಹಿಸಿ ಮೆಚ್ಚುಗೆಗಳಿಸಿದರು. ಚೆತ್ರಿಕಾ ಹೆಗಡೆ ಕಂಚಿಮನೆ ಪ್ರಾರ್ಥನೆ ಹಾಡಿದರು. ಪಿ.ವಿ.ಹೆಗಡೆ ಹೊಸಗದ್ದೆ ಸ್ವಾಗತಿಸಿದರು. ದಿವಾನ ಯಕ್ಷಸಮೂಹದ ಕಾರ್ಯದರ್ಶಿ ರಮೇಶ ಹಾರ್ಸಿಮನೆ ನಿರ್ವಹಿಸಿದರು.

ಕೃಪೆ : http://kannadaprabha.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ